Enta Preethi Nan Yesu Preethi kannada Christian Song Lyrics

christian song lyrics, christian telugu songs lyrics, christian english songs lyrics, christian tamil songs lyrics, christian hindi songs lyrics, christian malayalam songs lyrics, chriatian kannada songs lyrics christian bengali songs lyrics.

Enta Preethi Nan Yesu Preethi kannada Christian Song Lyrics

Credits:

Unknown

Lyrics:

ಬಂಧುಗಳು ಬಂದು ಹೋಗುವ ತನಕ
ಸ್ನೇಹಿತರು ಹಣ ಇರುವ ತನಕ
ಈ ಜೀವಾ ಉಸಿರ ಇರುವ ತನಕ
ನನ್ನ ಯೇಸು ಪ್ರೀತಿಯು ಕೊನೆ ತನಕ
ಎಂತಾ ಪ್ರೀತಿ ನನ್ನ ಯೇಸು ಪ್ರೀತಿ
ಶಿಲುಬೆ ಏರಿ ಪ್ರಾಣ ಕೊಟ್ಟ ಪ್ರೀತಿ

ಸಾವು ಬದುಕಿನ ಮಧ್ಯದಲ್ಲಿ
ಮರಣದ ಹಾಸಿಗೆ ಎಲ್ಲಿ
ಹುಡುಕಿ ಬಂದು ರಷಿಸಿದ ಪ್ರೀತಿಗೆ
ಬದಲೇನು ಕೊಡಲಿ ಓ ಯೇಸಪ್ಪ
ನನ್ನನೇ ತಂದಿರುವೆ ಸ್ವೀಕರಿಸಪ್ಪ
ಎಂತಾ ಪ್ರೀತಿ ನನ್ನ ಯೇಸು ಪ್ರೀತಿ
ಶಿಲುಬೆ ಏರಿ ಪ್ರಾಣ ಕೊಟ್ಟ

ಸಾಲ ಸಂಕಷ್ಟದಲ್ಲಿ
ನಿಂದೆ ಅಪಮಾನಗಳಲ್ಲಿ
ಕರಗಳ ಚಾಚಿ ಆದರಿಸಿದ ಪ್ರೀತಿಗೆ
ಬದಲೇನು ಕೊಡಲಿ ಓ ಯೇಸಪ್ಪ
ನನ್ನನೇ ತಂದಿರುವೆ ಸ್ವೀಕರಿಸಪ್ಪ
ಎಂತಾ ಪ್ರೀತಿ ನನ್ನ ಯೇಸು ಪ್ರೀತಿ
ಶಿಲುಬೆ ಏರಿ ಪ್ರಾಣ ಕೊಟ್ಟ

ಪಾಪ ಶಾಪವ ಹೊರಿಯಲು
ನೀತಿವಂತನಾಗಿ ಬಾಳಲು
ಕಲ್ವರಿ ಶಿಲುಬೆಯಲ್ಲಿ ತೋರಿದ ಪ್ರೀತಿಗೆ
ಬದಲೇನು ಕೊಡಲಿ ಓ ಯೇಸಪ್ಪ
ನನ್ನನೇ ತಂದಿರುವೆ ಸ್ವೀಕರಿಸಪ್ಪ
ಎಂತಾ ಪ್ರೀತಿ ನನ್ನ ಯೇಸು ಪ್ರೀತಿ
ಶಿಲುಬೆ ಏರಿ ಪ್ರಾಣ ಕೊಟ್ಟ

Full Video Song On Youtube:

📌(Disclaimer):
All rights to lyrics, compositions, tunes, vocals, and recordings shared on this website belong to their original copyright holders.
This blog exists solely for spiritual enrichment, worship reference, and non-commercial use.
No copyright infringement is intended. If any content owner wishes to request removal, kindly contact us, and we will act accordingly.

👉The divine message in this song👈

ಈ ಕನ್ನಡ ಕ್ರೈಸ್ತ ಹಾಡಿನ ಸಾರಾಂಶವು ತುಂಬಾ ಆಳವಾದ Jesus Christ ಅವರ ನಿರಂತರ ಮತ್ತು ತ್ಯಾಗಮಯ ಪ್ರೀತಿ ಬಗ್ಗೆ ಮಾತನಾಡುತ್ತದೆ. 🙏

ಹಾಡಿನ ಮುಖ್ಯ ಸಂದೇಶ:
ಮಾನವರ ಸಂಬಂಧಗಳು ಮತ್ತು ಸ್ನೇಹಗಳು ಕಾಲಾಂತರದಲ್ಲಿ ಬದಲಾಗಬಹುದು, ಆದರೆ ಯೇಸುವಿನ ಪ್ರೀತಿ ಮಾತ್ರ ಜೀವನದ ಅಂತ್ಯವರೆಗೂ ಸ್ಥಿರವಾಗಿರುವ ಪ್ರೀತಿ. ಆತನು ಶಿಲುಬೆಯಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ಪ್ರೀತಿ, ಪಾಪ ಮತ್ತು ಕಷ್ಟಗಳಿಂದ ಮನುಷ್ಯನನ್ನು ರಕ್ಷಿಸುವ ಅತ್ಯಂತ ಮಹತ್ತರವಾದ ಪ್ರೀತಿ ಎಂದು ಹಾಡು ಸಾರುತ್ತದೆ.

ಸಂಕ್ಷಿಪ್ತವಾಗಿ:

  • ಮಾನವ ಸಂಬಂಧಗಳು ತಾತ್ಕಾಲಿಕ, ಯೇಸುವಿನ ಪ್ರೀತಿ ಶಾಶ್ವತ

  • ಸಂಕಷ್ಟ, ಅಪಮಾನ, ದುಃಖಗಳಲ್ಲಿ ಯೇಸು ಕೈಹಿಡಿಯುವವರು

  • ಶಿಲುಬೆಯ ತ್ಯಾಗವು ಅವರ ಪ್ರೀತಿಯ ಅತ್ಯುನ್ನತ ಉದಾಹರಣೆ

  • ಪಾಪದಿಂದ ರಕ್ಷಿಸಿ ನೀತಿವಂತ ಜೀವನಕ್ಕೆ ನಡೆಸುವ ಪ್ರೀತಿ

  • ಆ ಪ್ರೀತಿಗೆ ಪ್ರತಿಯಾಗಿ ನಾವು ನಮನ್ನೇ ಸಮರ್ಪಿಸಬೇಕು ಎಂಬ ಸಂದೇಶ

ಒಟ್ಟಿನಲ್ಲಿ, ಈ ಹಾಡು ಯೇಸುವಿನ ತ್ಯಾಗಪೂರ್ಣ, ನಿಷ್ಠಾವಂತ, ಮತ್ತು ಅಳತೆಯಾಗದ ಪ್ರೀತಿಯನ್ನು ಹೊಗಳುವ ಭಕ್ತಿಪೂರ್ಣ ಆರಾಧನಾ ಗೀತೆಯಾಗಿದೆ.

***********
📖 For more Telugu and multilingual Christian content, visit: Christ Lyrics and More

Post a Comment

0 Comments